Tip:
Highlight text to annotate it
X
ನೀವು ಯಾವಾಗಲಾದರೂ ರಾತ್ರಿ ಆಕಾಶವನ್ನು ನೋಡಿ ಯೋಚಿಸಿದ್ದೀರಾ?
ಮೇಲೆ ಮಿನುಗುವ ನಕ್ಷತ್ರಗಳ ಬಗ್ಗೆ ಯೋಚಿಸಿದ್ದೀರಾ?
ಅವು ನಮ್ಮಿಂದ ಎಷ್ಟು ದೂರ ಹಾಗು ದೊಡ್ಡದಾಗಿವೆ, ಅವುಗಳ ಆಚೆ ಏನು ಇರುತ್ತದೆ
ಇತ್ಯಾದಿ...
ಸರಿ
ಆಕಾಶದಲ್ಲಿ ಕಾಣುವ ಎಲ್ಲಾ ವಸ್ತುಗಳಾದ ಸೂರ್ಯ,
ಚಂದ್ರ, ನಕ್ಷತ್ರಗಳನ್ನು ಆಕಾಶಕಾಯಗಳು ಎಂದು ಕರೆಯಲಾಗುತ್ತದೆ.
ನಾವು ರಾತ್ರಿ ಆಕಾಶದಲ್ಲಿ ಕಾಣುವ ಸೂರ್ಯ ಮತ್ತು ಎಲ್ಲಾ ನಕ್ಷತ್ರಗಳು
ತಾರಾಗಣಕ್ಕೆ ಸೇರಿವೆ.
ಸುಮಾರು 13.7 ಶತಕೋಟಿ ವರ್ಷಗಳ ಹಿಂದೆ ಹುಟ್ಟಿಕೊಂಡಿರುವ ಬ್ರಹ್ಮಾಂಡವು
ಹಲವಾರು ತಾರಾಗಣಗಳನ್ನು ಒಳಗೊಂಡಿದೆ.
ತಾರಾಗಣಗಳು ಧೂಳು, ಅನಿಲ ಮತ್ತು ಲೆಕ್ಕವಿಲ್ಲದಷ್ಟು ನಕ್ಷತ್ರಗಳಿಂದ ಸಂಯೋಜನೆಗೊಂಡ
ವಿಸ್ತಾರವಾದ ಬಾಹ್ಯಾಕಾಶ ವ್ಯವಸ್ಥೆಗಳಾಗಿವೆ.
ನಕ್ಷತ್ರಗಳು:
ಆಕಾಶದಲ್ಲಿ ಹೊಳೆಯುವ ದೊಡ್ಡ ಅನಿಲದ ಚೆಂಡುಗಳನ್ನು ನಕ್ಷತ್ರಗಳು ಎಂದು ಕರೆಯುತ್ತಾರೆ.
ನಕ್ಷತ್ರಗಳು ನೀಹಾರಿಕೆ ಎಂದು ಕರೆಯುವ ಮೋಡಗಳ ರೂಪದಲ್ಲಿ ಇರುವ
ಅನಿಲ ಮತ್ತು ಬಾಹ್ಯಾಕಾಶದ ಧೂಳಿನಿಂದ ಮಾಡಲ್ಪಟ್ಟಿವೆ,
ಮತ್ತು ಅವುಗಳು ತಮ್ಮ ಸ್ವಂತ ಉಷ್ಣ ಮತ್ತು ಬೆಳಕನ್ನು ಹೊಂದಿರುತ್ತವೆ
ನಕ್ಷತ್ರಗಳು ನಮ್ಮಿಂದ ತುಂಬಾ ದೂರ ಇರುತ್ತವೆ,
ಆದ್ದರಿಂದ ಅವುಗಳು ಅತೀ ಸಣ್ಣದಾಗಿ ಮತ್ತು ಹೊಳಪಾಗಿ ಗೋಚರಿಸುತ್ತವೆ.
ಸೂರ್ಯ: ಇದು
ಸೌರಮಂಡಲದ ಅತ್ಯಂತ ದೊಡ್ಡ ವಸ್ತುವಾಗಿದೆ.
ಇದು ಸೌರಮಂಡಲದ ಮಧ್ಯದಲ್ಲಿದೆ.
ಇದು ತುಂಬಾ ಬಿಸಿಯಾದ ಅನಿಲದ ಒಂದು ತಿರುಗುವ ಚೆಂಡಿನಂತಿದೆ.
ಭೂಮಿಯ ಸಂಭವನೀಯ ಜೀವನವು ಸೂರ್ಯನ ಶಾಖ ಮತ್ತು ಬೆಳಕಿನಿಂದ ಸಾಧ್ಯವಾಗಿದೆ.
ಸೂರ್ಯ ಪರಮಾಣು ಸಮ್ಮಿಳನ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡಿರುತ್ತದೆ.
ಇದು ತನ್ನ ಗೋಳಾಕಾರದ ಒಳಗೆ 1.3 ದಶಲಕ್ಷ ಭೂಮಿಗಳನ್ನು
ಹೊಂದಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.
ಸೂರ್ಯ 4.5 ಶತಕೋಟಿ ವರ್ಷಕ್ಕೂ ಹೆಚ್ಚಿನ ಕಾಲದಿಂದ ಉರಿಯುತ್ತಿದೆ.
ಮತ್ತು ಸೂರ್ಯ ತನ್ನ ಗುರುತ್ವಾಕರ್ಷಣ ಬಲದಿಂದ
ಎಲ್ಲಾ ಗ್ರಹಗಳನ್ನು ಅವುಗಳ ಕಕ್ಷೆಗಳಲ್ಲಿ ಇರಿಸುತ್ತದೆ.
ಸೌರಮಂಡಲ:
ನಾವು ಸೌರಮಂಡಲದ ಬಗೆ ಮಾತಾಡುವಾಗ,
ಅಂದರೆ ಸೂರ್ಯ, ಗ್ರಹಗಳು,
ಆಕಾಶಕಾಯಗಳು, ಉಲ್ಕೆಗಳು, ಧೂಮಕೇತುಗಳು
ಮತ್ತು ನಕ್ಷತ್ರಪುಂಜ. ಮೊದಲ ನಾಲ್ಕು ಗ್ರಹಗಳಾದ
ಬುಧ, ಶುಕ್ರ, ಭೂಮಿ ಮತ್ತು ಮಂಗಳ
ಹೆಚ್ಚಾಗಿ ಬಂಡೆಗಳಿಂದ ರಚಿತವಾಗಿದೆ ಮತ್ತು ಇವುಗಳನ್ನು ಒಳ ಗ್ರಹಗಳು ಎಂದು ಕರೆಯಲಾಗುತ್ತದೆ
ಹಾಗೂ ಇವುಗಳಲ್ಲಿ ಕೆಲವು ಯಾವುದೇ ಚಂದ್ರನನ್ನು (ನೈಸರ್ಗಿಕ ಉಪಗ್ರಹ) ಹೊಂದಿಲ್ಲ.
ಅವಗಳನ್ನು ಕಡಿಮೆ ಗ್ರಹಗಳು ಎಂದು ಕರೆಯಲಾಗುತ್ತದೆ.
ಹೊರ ಗ್ರಹಗಳಾದ ಗುರು, ಶನಿ, ಯುರೇನಸ್, ನೆಪ್ಚೂನ್
ಶನಿ, ಯುರೇನಸ್, ನೆಪ್ಚೂನ್
ಇವುಗಳು ಬಹುತೇಕ ದೊಡ್ಡದಾಗಿ, ಅನಿಲರೂಪದಲ್ಲಿ,
ಉಂಗುರದ ಆಕಾರದಲ್ಲಿ ಇರುತ್ತವೆ ಮತ್ತು ಇವುಗಳು ಅನೇಕ ಉಪಗ್ರಹಗಳನ್ನು ಹೊಂದಿವೆ
ಈ ಗ್ರಹಗಳು ಹಗುರವಾಗಿರುವದರಿಂದ ವೇಗವಾಗಿ ಚಲಿಸುತ್ತವೆ
ಇವುಗಳನ್ನು ಅನಿಲ ದೈತ್ಯಗಳು ಎಂದು ಕರೆಯಲಾಗುತ್ತದೆ.
ಆಂತರಿಕ ಗ್ರಹಗಳು
ಮತ್ತು ಹೊರ ಗ್ರಹಗಳು ಕ್ಷುದ್ರಗ್ರಹ ಪಟ್ಟಿಯ ಮುಖಾಂತರ ಬೇರ್ಪಟ್ಟಿರುತ್ತವೆ.
ಕ್ಷುದ್ರಗ್ರಹಗಳು: ಇವುಗಳನ್ನು ಸಣ್ಣ ಗ್ರಹಗಳು ಎಂದೂ ಸಹ ಕರೆಯಲಾಗುತ್ತದೆ
ಅವುಗಳು ಕಲ್ಲಿನ ಅಥವಾ ಲೋಹದ ವಸ್ತುಗಳಾಗಿವೆ ಇವುಗಳಲ್ಲಿ ಹೆಚ್ಚಿನವು
ಮಂಗಳ ಮತ್ತು ಗುರು ಗ್ರಹಗಳ ನಡುವೆ ಇರುವ ಕ್ಷುದ್ರಗ್ರಹ ಪಟ್ಟಿಯಲ್ಲಿ ಸೂರ್ಯನ ಕಕ್ಷೆಯನ್ನು ಸುತ್ತುತ್ತವೆ.
ಅವುಗಳು ಯಾವುದೇ ವಾತಾವರಣವನ್ನು ಹೊಂದಿಲ್ಲ. ಸುಮಾರು 40,000 ಕ್ಕೂ ಹೆಚ್ಚು ಕ್ಷುದ್ರಗ್ರಹಗಳು ಇವೆ
ಸೆರೆಸ್ ಅತಿ ದೊಡ್ಡ ಕ್ಷುದ್ರಗ್ರಹ ಆಗಿದೆ
ಗ್ರಹಗಳ ಬಗ್ಗೆ ಕೆಲವು ಸಂಗತಿಗಳು.
ಭೂಮಿ ಜನಸಾಂದ್ರತೆಯ ಗ್ರಹವಾಗಿದೆ.
ಗುರು ಗ್ರಹವು ಪ್ರಭಲವಾದ ಗುರುತ್ವಾಕರ್ಷಣ ಬಲವನ್ನು ಅದರ ಮೇಲ್ಮೈಯಲ್ಲಿ ಹೊಂದಿದೆ.
ದೀರ್ಘಾವಧಿಯ ದಿನವನ್ನು ಶುಕ್ರ ಗ್ರಹ ಹೊಂದಿದೆ. ಕಡಿಮೆ ಅವಧಿಯ ದಿನವನ್ನು
ಗುರು ಗ್ರಹ ಹೊಂದಿದೆ.
ಶುಕ್ರಗ್ರಹ ಅತ್ಯಂತ ಪ್ರಕಾಶಮಾನವಾದ ಗ್ರಹ ಮತ್ತು ಇದನ್ನು ಬರಿಗಣ್ಣಿನಿಂದ ನೋಡಬಹುದು
ಮಂಗಳ ಗ್ರಹವನ್ನು ಕೆಂಪು ಗ್ರಹವೆಂದು ಕರೆಯಲಾಗುತ್ತದೆ.
ಇದು ನಮ್ಮ ಸೌರ ವ್ಯವಸ್ಥೆಯಲ್ಲಿ ಅತಿ ದೊಡ್ಡ ಜ್ವಾಲಾಮುಖಿಯ ಮನೆಯಾಗಿದೆ.
ಗುರು ಗ್ರಹವು ಅತಿ ದೊಡ್ಡದಾದ ಮತ್ತು ಬುಧ ಗ್ರಹ
ಅತೀ ಚಿಕ್ಕ ಗ್ರಹ ಆಗಿದೆ.
ಎಲ್ಲಾ ಗ್ರಹಗಳು ಗೋಳಾಕಾರದಲ್ಲಿ ಇವೆ.
ಅವುಗಳು ಸೂರ್ಯನ ಸುತ್ತ ಕಕ್ಷೆಗಳು ಎಂದು ಕರೆಯುವ
ದೀರ್ಘವೃತ್ತಾಕಾರದ ಮಾರ್ಗಗಳಲ್ಲಿ ಸುತ್ತುತ್ತವೆ.
ಬುಧ ಅತ್ಯಂತ ಹತ್ತಿರವಾದ ಗ್ರಹವಾಗಿದೆ
ಮತ್ತು ಇದು ಸುರ್ಯನ ಸುತ್ತ ಒಂದು ಸುತ್ತು ಸುತ್ತಲು 88 ದಿನಗಳು ಬೇಕಾಗುತ್ತವೆ.
ಭೂಮಿ ಸುರ್ಯನ ಸುತ್ತ ಒಂದು ಸುತ್ತು ಸುತ್ತಲು 365 ದಿನಗಳು ಮತ್ತು 6 ಗಂಟೆಗಳು ಬೇಕಾಗುತ್ತದೆ
ಎಲ್ಲಾ ಗ್ರಹಗಳು ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತವೆ
ಆದರೆ ಯುರೇನಸ್ ಮತ್ತು ಶುಕ್ರ ಗ್ರಹಗಳು
ಪೂರ್ವದಿಂದ ಪಶ್ಚಿಮದ ಕಡೆ ಸುತ್ತುತ್ತವೆ.
ಸೂರ್ಯನಿಗೆ ಹತ್ತಿರವಿದ್ದಷ್ಟು ಒಂದು ಗ್ರಹವು, ಹೆಚ್ಚು ಬಿಸಿಯಾಗಿರುತ್ತದೆ
ಮತ್ತು ಸೂರ್ಯನಿಂದ ದೂರವಿದ್ದಷ್ಟು ಒಂದು ಗ್ರಹವು, ಹೆಚ್ಚು ತಂಪಾಗಿರುತ್ತದೆ.
ಉಲ್ಕೆಗಳು: ನೀವು ಯಾವಾಗಲಾದರೂ ರಾತ್ರಿ ಆಕಾಶದಲ್ಲಿ
ಒಂದು ಬೆಳಕಿನ ಗೆರೆಯನ್ನು ನೋಡಿದ್ದೀರಾ?
ಹೌದು! ಬೆಂಕಿಯ ನಕ್ಷತ್ರಗಳು. ಅವುಗಳನ್ನು ವಾಸ್ತವವಾಗಿ ಉಲ್ಕೆಗಳೆಂದು ಕರೆಯುತ್ತಾರೆ
ಅವುಗಳು ಬಾಹ್ಯಾಕಾಶದಿಂದ ಕಲ್ಲು, ಧೂಳು ಅಥವಾ ಲೋಹದ ಸಣ್ಣ ಚೂರುಗಳು
ವಾತಾವರಣದ ಒಳಗೆ ಅತೀ ವೇಗದಿಂದ ಪ್ರವೇಶಿಸುವುದರಿಂದ ಉಂಟಾಗುತ್ತವೆ.
ಧೂಮಕೇತುಗಳು: ಇವುಗಳು ಅತಿ ಚಿಕ್ಕ
ಹಿಮದಿಂದ ಕೂಡಿದ ಸೂರ್ಯನ ಸುತ್ತ ಸುತ್ತುವ ಆಕಾಶಕಾಯಗಳಾಗಿವೆ.
ಅವುಗಳು ಹಿಮದ ಕಲ್ಲಿನ ಚೆಂಡುಗಳಾಗಿವೆ.
ಅವುಗಳು ತಮ್ಮ ಅತ್ಯಂತ ದೀರ್ಘವೃತ್ತೀಯ ಕಕ್ಷೆಗಳಲ್ಲಿ
ಸೂರ್ಯನ ಹತ್ತಿರಕ್ಕೆ ಬಂದಂತೆ ಬಾಲವನ್ನು ಬೆಳೆಸಿಕೊಳ್ಳುತ್ತವೆ.
ಹಾಗೆ
ಧೂಮಕೇತುಗಳು ಬಿಸಿ ಆದಂತೆ, ಅನಿಲ ಮತ್ತು ಧೂಳನ್ನು
ಹೊರದೂಡುತ್ತವೆ ಮತ್ತು ತಮ್ಮ ಹಿಂದೆ ಜಾಡನ್ನು ಬಿಟ್ಟು ಹೋಗುತ್ತವೆ.
ಸೂರ್ಯ ಈ ಜಾಡನ್ನು ಪ್ರಕಾಶಿಸುತ್ತಾನೆ.
ಅದು ಬೆಳಗಲು ಕಾರಣವಾಗುತ್ತದೆ.
ಬಂದು ಸ್ಪಷ್ಟ ರಾತ್ರಿಯಲ್ಲಿ ನಕ್ಷತ್ರಗಳಿಂದ ತುಂಬಿಕೊಂಡಿರುವ ಆಕಾಶವನ್ನು ನೋಡಲು ಪ್ರಯತ್ನಿಸಿ
ನೀವು ಅನೇಕ ಮಾದರಿಯ ನಕ್ಷತ್ರ ಗುಂಪುಗಳ ರಚನೆಯನ್ನು ಕಾಣಬಹುದು
ಅವುಗಳನ್ನು ನಕ್ಷತ್ರಪುಂಜಗಳೆಂದು ಕರೆಯಲಾಗುತ್ತದೆ.
ಕೆಲವು ಪ್ರಸಿದ್ಧ ನಕ್ಷತ್ರಪುಂಜಗಳೆಂದರೆ, ಸಪ್ತ ಋಷಿ ಮಂಡಲ
ಓರಿಯನ್(ಮಹಾವ್ಯಾಧ), ಅರ್ಸಾ(ದೊಡ್ಡ ಕರಡಿ),ಇತ್ಯಾದಿ ...
ಅತ್ಯಂತ ಪ್ರಕಾಶಮಾನವಾದ ನಕ್ಷತ್ರಪುಂಜ ಕ್ರೂಸ್ ಆಗಿದೆ
ಮಕ್ಕಳೇ
ನೀವು ಸೌರಮಂಡಲದ ಪ್ರವಾಸವನ್ನು ಆನಂದಿಸಿದಿರೆಂದು ಭಾವಿಸುತ್ತೇವೆ
ಧನ್ಯವಾದಗಳು!!!